Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಅಡಿಕೆಯ ಸಮಗ್ರ ಸಂಶೋಧನೆಗೆ ಬಜೆಟ್‌ನಲ್ಲಿ ನಿಧಿ ಹಂಚಿಕೆ ಮಾಡುವಂತೆ ಕ್ಯಾಂಪ್ಕೊ ಮನವಿ
    News

    ಅಡಿಕೆಯ ಸಮಗ್ರ ಸಂಶೋಧನೆಗೆ ಬಜೆಟ್‌ನಲ್ಲಿ ನಿಧಿ ಹಂಚಿಕೆ ಮಾಡುವಂತೆ ಕ್ಯಾಂಪ್ಕೊ ಮನವಿ

    adminBy adminDecember 2, 2024

    ಮಂಗಳೂರು: ಅಡಿಕೆಯ ಸುರಕ್ಷತೆ ಮತ್ತು ಕ್ಯಾನ್ಸರ್ ರೋಗ ಶಮನಗೊಳಿಸುವ ಅದರ ಆಯುರ್ವೇದೀಯ ಗುಣಗಳ ಬಗ್ಗೆ ಸಮಗ್ರ ಸಂಶೋಧನೆ ನಡೆಸಬೇಕು, ಇದಕ್ಕಾಗಿ ಮುಂಬರುವ ಬಜೆಟಟ್‌ನಲ್ಲಿ ನಿಧಿ ಹಂಚಿಕೆ ಮಾಡಬೇಕು ಎಂದು  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಪತ್ರ ಬರೆದು ಮನವಿ ಮಾಡಿದ್ದಾರೆ.

    ಅಡಿಕೆ ಕೃಷಿ ಲಕ್ಷಾಂತರ ಬೆಳೆಗಾರರಿಗೆ ಜೀವನಾಧಾರವಾಗಿದೆ. ಭಾರತದ  ಸಾಂಸ್ಕೃತಿಕ ಜನಜೀವನದಲ್ಲಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಅಡಿಕೆಯು ಮಹತ್ತರ ಪಾತ್ರ ವಹಿಸಿರುವುದರ ಕುರಿತು ಹಣಕಾಸು ಸಚಿವರಿಗೆ ಬರೆದ  ಪತ್ರದಲ್ಲಿ ಉಲ್ಲೇಖಿಸಲಾಗಿದೆ.  ಭಾರತದಲ್ಲಿ ಸುಮಾರು ೯.೫೫ ಲಕ್ಷ ಹೆಕ್ಟೇರ್ ವ್ಯಾಪ್ತಿಯಲ್ಲಿ ಅಡಿಕೆ ಕೃಷಿ ವಿಸ್ತರಿಸಿದ್ದು, ವಾರ್ಷಿಕ ೧೪ರಿಂದ ೧೮ ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಅಡಿಕೆ ಉತ್ಪಾದನೆಯಾಗುತ್ತಿದೆ. ಕೇಂದ್ರ ಸರಕಾರ ಜಿಎಸ್‌ಟಿ ಪದ್ಧತಿ ಜಾರಿಗೊಳಿಸಿದಂದಿನಿಂದ ಈವರೆಗೆ ಬರೇ ಕ್ಯಾಂಪ್ಕೊ ಒಂದೇ ಸಂಸ್ಥೆ  ಸುಮಾರು ೬೫೦ ಕೋಟಿ ರೂ. ತೆರಿಗೆ ಪಾವತಿ ಮಾಡಿರುವುದರ ಬಗ್ಗೆ ಕೇಂದ್ರ ಸಚಿವರ ಗಮನಕ್ಕೆ ತರಲಾಗಿದೆ.

    vinay kumar soorinje sahakara mahamandala scdcc bank training programme D.K Ditrict sahakara union https://chat.whatsapp.com/Ge11n7QCiMj5QyPvCc0H19

    ವಿಶ್ವ ಆರೋಗ್ಯ ಸಂಸ್ಥೆಯು ಅಡಿಕೆಯನ್ನು ಕ್ಯಾನ್ಸರ್‌ಕಾರಕವೆಂದು ವರ್ಗೀಕರಿಸಿರುವುದು ಬೆಳೆಗಾರರನ್ನು ಸಂಕಷ್ಟಕ್ಕೀಡು ಮಾಡಿದೆ. ಅಡಿಕೆಯನ್ನು ಗುಟ್ಕಾ ಮತ್ತು ತಂಬಾಕಿನ ಜೊತೆ ಬಳಸುತ್ತಿರುವ ಕಾರಣದಿಂದ ಅದನ್ನು ಕ್ಯಾನ್ಸರ್ ಕಾರಕವೆಂದು ಪರಿಗಣಿಸಲಾಗಿದೆ.

    ವಿಶ್ವ ಆರೋಗ್ಯ ಸಂಸ್ಥೆಯ ವರ್ಗೀಕರಣ ನ್ಯಾಯೋಚಿತವಾಗಿಲ್ಲವೆಂದು ದಾಖಲೆ ಸಮೇತ ಸಾಬೀತುಪಡಿಸಲು, ಕ್ಯಾಂಪ್ಕೊ ಹಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಸಿರುವ ಸಂಶೋಧನಾ ವರದಿಗಳನ್ನು ಸಲ್ಲಿಸಿದೆ. ಎಲ್ಲಾ ವರದಿಗಳೂ ಅಡಿಕೆಯ ಉಪಯೋಗ ಕ್ಯಾನ್ಸರ್‌ಕಾರಕವಲ್ಲ ಬದಲಾಗಿ ಕ್ಯಾನ್ಸರ್ ಅನ್ನು ಶಮನಗೊಳಿಸುವ ಗುಣಗಳನ್ನು ಹೊಂದಿರುವ ಬಗ್ಗೆ ರುಜುವಾತು ಪಡಿಸಿವೆ. ಕೆಲವೊಂದು ಪ್ರಮುಖ ವರದಿಗಳೆಂದರೆ;

    • ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ , ಅಮೇರಿಕಾದ ಎಮರಾಯ್ ಯುನಿವರ್ಸಿಟಿ, ಮತ್ತು ತೈವಾನ್‌ನ ತೈಪೆ ಮೆಡಿಕಲ್ ಯುನಿವರ್ಸಿಟಿ ಹಾಸ್ಪಿಟಲ್‌ನ ಸಂಶೋಧನೆಗಳು. ಈ ಎಲ್ಲಾ ಸಂಶೋಧನಾ ವರದಿಗಳಲ್ಲಿ ಅಡಿಕೆಯ ಸಾರವು ಕ್ಯಾನ್ಸರ್‌ಕಾರಕ ಗೆಡ್ಡೆಗಳ ಬೆಳವಣಿಗೆ ನಿಯಂತ್ರಿಸುವ ಗುಣಗಳ ಬಗ್ಗೆ ಸಾಕ್ಷೀಕರಿಸಿವೆ.
    • ನಿಟ್ಟೆ ಯುನಿವರ್ಸಿಟಿ ನಡೆಸಿರುವ ಸಮೀಕ್ಷೆಗಳಲ್ಲಿ, ಬರೇ ಅಡಿಕೆಯನ್ನು ಉಪಯೋಗಿಸುವ ಜನರಲ್ಲಿ ಬಾಯಿ ಕ್ಯಾನ್ಸರ್‌ನ ಕುರುಹುಗಳು ಕಂಡು ಬಂದಿರುವುದಿಲ್ಲ.

    ಭಾರತಲ್ಲಿರುವ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳಾದ ಐಸಿಎಂಆರ್ , ಐಸಿಎಆರ್, ಎಐಐಎಂಎಸ್ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್‌ ಸೈನ್ಸ್ ಗಳು ಸಂಯುಕ್ತವಾಗಿ ಅಥವಾ ಪರಸ್ಪರ ಸಹಕಾರದೊಂದಿಗೆ ಅಡಿಕೆಯನ್ನು ನಿರ್ದಿಷ್ಟವಾಗಿ ಅದರ ಮೂಲರೂಪದಲ್ಲೇ ಸಂಶೋಧನೆ ನಡೆಸುವ ಅಗತ್ಯತೆಯ ಕುರಿತು ಕ್ಯಾಂಪ್ಕೊ ಪ್ರಸ್ತಾವನೆ ಸಲ್ಲಿಸಿದೆ. ಕ್ಯಾಂಪ್ಕೊ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಇತ್ತೀಚೆಗಷ್ಟೇ  ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ ಅವರನ್ನು ಚೆನ್ನೈನಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿರುತ್ತಾರೆ. ಆ ಸಂದರ್ಭದಲ್ಲಿ ಡಾ.ಸೌಮ್ಯ ಅವರು ಕ್ಯಾಂಪ್ಕೊದ ಪ್ರಸ್ತಾವನೆಯನ್ನು ವಿಶ್ಲೇಷಿಸಿ , ಡಬ್ಲ್ಯುಎಚ್‌ಒ ಅಡಿಕೆಯ ವರ್ಗೀಕರಣವನ್ನು ಪರಾಮರ್ಶಿಸುವ ಅಗತ್ಯತೆ ಬಗ್ಗೆ ಸಹಮತ ಸೂಚಿಸಿದ್ದಾರೆ.

    ಅಡಿಕೆಯ ಉಪಯೋಗದ ಬಗ್ಗೆ ನ್ಯಾಯೋಚಿತ ಮತ್ತು ವಸ್ತುನಿಷ್ಠ ಸಂಶೋಧನೆ ನಡೆಸಿ, ಅದರ ಔಷಧೀಯ ಗುಣಗಳ ಬಗ್ಗೆ ವೈಜ್ಞಾನಿಕ ಪುರಾವೆಗಳನ್ನು  ದಾಖಲೀಕರಿಸಿ ವಿಶ್ವ ಆರೋಗ್ಯ ಸಂಸ್ಥೆಗೆ ಮನವರಿಕೆ ಮಾಡಿಸಬೇಕು. ಆಗ ಲಕ್ಷಾಂತರ ಬೆಳೆಗಾರರ ಬದುಕಿಗೆ ಭರವಸೆಯನ್ನು ಕೇಂದ್ರ ಸರಕಾರ ನೀಡಿದಂತಾಗುತ್ತದೆ. ಸಂಶೋಧನೆಗೆ ಬೇಕಾದ ನಿಧಿಯನ್ನು ಮುಂದಿನ ಬಜೆಟ್‌ನಲ್ಲಿ ಹಂಚಿಕೆ ಮಾಡುವಂತೆ ಎಲ್ಲಾ ರೈತರ ಪರವಾಗಿ ಕಿಶೋರ್ ಕುಮಾರ್ ಕೊಡ್ಗಿಯವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.

     

     

     

     

    Adike Areccanut Campco Cooperative Department Kishor kumar Kodgi Nirmala Seetharaman Spandana NEws Who
    Previous Articleನಮ್ಮ ಬದುಕು ದೇವರು ಮೆಚ್ಚುವಂತಿರಲಿ
    Next Article ಶ್ರೀಶಾ ಸೊಸೈಟಿಯಿಂದ ನಿರಂತರ ಸಮಾಜಮುಖಿ ಕಾರ್ಯಕ್ರಮ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.