ಹೇರಾಡಿ: ಇಲ್ಲಿನ ಅನನ್ಯ ಸೌಹಾರ್ದ ಸಹಕಾರಿ ಸಂಘದ ಐದನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ಶ್ರೀಮತಿ ರುಕ್ಮಿಣಿ ಶೆಡ್ತಿ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಕಾರಿಯ ಅಧ್ಯಕ್ಷ ಹರೀಶ ಬಾರ್ಕೂರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
https://chat.whatsapp.com/Ge11n7QCiMj5QyPvCc0H19
ಸಂಘವು ವರದಿ ವರ್ಷದಲ್ಲಿ 27 ಕೋಟಿ ರೂ. ಅಧಿಕ ವಹಿವಾಟು ನಡೆಸಿದೆ. 13 ಲಕ್ಷ ರೂ. ಪಾಲು ಬಂಡವಾಳ, 5.22 ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು, 5.18 ಕೋಟಿ ರೂ. ಮಿಕ್ಕಿ ಸಾಲ ವಿತರಿಸಿದೆ. 2023-24ನೇ ಸಾಲಿನಲ್ಲಿ 15,99,402 ರೂ. ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.15 ಡಿವಿಡೆಂಡ್ ನೀಡಲು ಘೋಷಣೆ ಮಾಡಲಾಯಿತು.
ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಭೆಯಲ್ಲಿ ಸಹಕಾರಿಯ ಎಲ್ಲ ನಿರ್ದೇಶಕರು, ಸಿಬ್ಬಂದಿ ವರ್ಗದವರು ಹಾಜರಿದ್ದರು. ನಿರ್ದೇಶಕ ರಜನಿಕಾಂತ ಸ್ವಾಗತಿಸಿ, ನಿರ್ದೇಶಕ ರಾಜೇಂದ್ರ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com